ಪುತ್ತೂರು:ಮಾಡಾವಿನಿಂದ ಸುಳ್ಯಕ್ಕೆ 110 ಕೆವಿ ಲೈನ್ ಹಾದು ಹೋಗುವ ಅರಣ್ಯ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವು ಮಾಡುವಲ್ಲಿ ಶೀಘ್ರ ಮಕ್ರ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಅವರು ಡಿಎಫ್ಒ ಅವರಿಗೆ ಸೂಚನೆ ನೀಡಿದ್ದಾರೆ.110 ಕೆ ವಿ ಲೈನ್ ಗಳು ಅರಣ್ಯದ ಮೂಲಕ ಹಾದು ಹೋಗುತ್ತಿದೆ. ಮರಗಳ ತೆರವುಮಾಡದ ಕಾರಣ
ಈ ಭಾಗದಲದಲ್ಲಿ ಲೈನ್ ಕಾಮಗಾರಿ ನಡೆದಿಲ್ಲ. ಈ ಹಿಂದೆ ಮರಗಳನ್ನು ತೆರವುಮಾಡುವಂತೆ ಆದೇಶ ಆಗಿದ್ದರೂ ಕನಿಷ್ಟ ಮರಗಳನ್ನು ತೆರವು ಮಾಡಿ ಎಂಬ ಸೂಚನೆ ಇದ್ದ ಕಾರಣ ಮರಗಳ ತೆರವಿಗೆ ಮುಂದಾಗಿರಲಿಲ್ಲ. ಇದೀಗ ಶಾಸಕ ಅಶೋಕ್ ರೈ ಅವರಿಗೆ ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಡಿಎಫ್ ಒ ಅವರಿಗೆ ಕರೆ ಮಾಡಿದ ಶಾಸಕರು ವಿದ್ಯುತ್ ಲೈನ್ ಹಾದು ಹೋಗುವಲ್ಲಿ ಇಲಾಖೆ ಮೆಸ್ಕಾಂಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ





